Monday, June 8, 2009

ಸ್ವರ್ಗ

ಸಾಕಷ್ಟು "ಹಿಂದು"ಗಳಿಗೆ ಸ್ವರ್ಗ ಅಂದ್ರೆ ಏನು ಅಂತಾನೆ ಗೊತ್ತಿಲ್ದೆ ಹೋಗಿದೆ ಅನ್ಸುತ್ತೆ. ಕೆಲವೊಮ್ಮೆ ಮಾತುಕತೆಗಳಲ್ಲಿ, ಹರಟೆಗಳಲ್ಲಿ, ವಾದಗಳಲ್ಲಿ, public forumಗಳಲ್ಲಿ ನೋಡಿದ್ದೇನೆ "ಸ್ವರ್ಗ == ಮೊಕ್ಷ" ಅಥ್ವ "ಮೋಕ್ಷ == ಸ್ವರ್ಗ" ಅನ್ನೋ ಹಾಗೆ ಮಾತಾಡೊದನ್ನ, ಬರ್ಯೋದನ್ನ. ಮೋಕ್ಷ ಅಂದ್ರೆ ಸ್ವರ್ಗಕ್ಕೆ ಹೋಗೋದು ಅನ್ನೋ ಹಾಗಿರುತ್ತೆ ಅವರ ವಾದ. ಹಾಗಾದ್ರೆ ಸ್ವರ್ಗ ಅಂದ್ರೆ ಏನು? ಮೋಕ್ಷ ಅಂದ್ರೆ ಏನು? ಇದರ ಬಗ್ಗೆ ಸ್ವಲ್ಪ ಬರ್ಯೋಣ ಅನ್ನುಸ್ತು. ನನ್ಗೆ ಅರ್ಥ ಆಗಿರೋ ಹಾಗೆ, ಆದಷ್ಟು basic levelನಲ್ಲಿ ಬರ್ಯಕ್ಕೆ ಪ್ರಯತ್ನಿಸ್ತೀನಿ, ನೋಡೋಣ.

ಮೋಕ್ಷ ಅಂದ್ರೆ ಏನು? ಸುಲುಭವಾಗಿ ಹೇಳೋದಾದ್ರೆ: ಕರ್ಮ, ದೇಹ ಬಂಧನದಿಂದ ಶಾಶ್ವತವಾಗಿ, ಕಾಯಂ ಬಿಡುಗಡೆ. ಸ್ವರ್ಗ ಅಂದ್ರೆ ತಾತ್ಕಾಲಿಕ, ಅಲ್ಪಕಾಲಿಕ ಬಿಡುಗಡೆಯಷ್ಟೆ. ಸ್ವರ್ಗ ಪಡ್ಯೋದು ಸುಲುಭ - ಕರ್ಮ, ನಿಯೋಜಿತ ಕರ್ಮ, ಸುಕರ್ಮ, ಅಥ್ವಾ ಸುಕಾಮ ಕರ್ಮ ಮಾಡಿದ್ರೂ ಸಾಕು. ಇದನ್ನ ಅರ್ಥ ಮಾಡ್ಕೊಳಕ್ಕೆ ಅತ್ಯಂತ ಅಮೂಲ್ಯವಾದ ಆಧಾರ ಶ್ರೀಮದ್ ಭಗವತ್ ಗೀತ. ಉದಾಹರಣೆಗೆ, ಒಂದು ಕಡೆ ಭಗವಂತ ಹೇಳ್ತಾನೆ: ಹತೋವಾ ಪ್ರಾಪ್ಯಸಿ ಸ್ವರ್ಗಮ್. ಅರ್ಜುನ ಯುದ್ಧದಲ್ಲಿ ಸತ್ತರೂ ಸ್ವರ್ಗವನ್ನ ಪಡೆಯುತೀಯೇ, ಗೆದ್ದರೆ ಆಳುತ್ತೀಯೆ ಅಂತ. ಗೀತೆಯಲ್ಲಿ ಅನೇಕಾದಿ ಕಡೆ ಭಗವಂತ ಹೇಳ್ತಾನೆ, ಕರ್ಮಖಾಂಡದ ಕಾರ್ಯಗಳನ್ನ ಮಾಡಿದರೆ, ಒಳ್ಳೆ ಕಾರ್ಯಗಳನ್ನ ಮಾಡಿದರೆ ಸ್ವರ್ಗ ಲೋಕ ಪ್ರಾಪ್ತಿ ಆಗುತ್ತೆ. ಆದ್ರೆ, ಒಂಬತ್ತನೆಯ ಅಧ್ಯಾಯದ ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶ್ಲೋಕಗಳಲ್ಲಿ ಹೀಗ್ ಹೇಳ್ತಾನೆ ಭಗವಂತ:
ತ್ರೈವಿದ್ಯಾಮಾಂ ಸೊಮಪಾಃ ಪೂತಪಾಪ
ಯಜ್ಞೈರಿಶ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೆ
ತೇಪುಣ್ಯಮಾಸಾದ್ಯ ಸುರೇದ್ರ ಲೋಕಂ
ಅಶ್ಣಂತಿ ದಿವ್ಯಾನ್ ದಿವಿದೇವ ಭೋಗಾನ್

ತೇ ತಂ ಭುಕ್ತ್ವಾ ಸ್ವರ್ಗ ಲೋಕಮ್ ವಿಶಾಲ
ಕ್ಷೀಣೆ ಪುಣ್ಯೆ ಮರ್ತ್ಯ ಲೋಕಮ್ ವಿಶಂತಿ
ಎವಂ ತ್ರಯಿ ಧರ್ಮಮನುಪ್ರಪನ್ನ
ಗತಾಗತಂ ಕಾಮ ಕಾಮಾಲಭಂತೆ
ಕರ್ಮದಿಂದ credit points ಸಿಗುತ್ತೆ, ಅದನ್ನ ಸ್ವರ್ಗ ಲೋಕದಲ್ಲಿ redeem ಮಾಡ್ಕೊಂಡು, ಸ್ವರ್ಗ ಲೋಕದ benefitsನ ಅನುಭವಿಸಿಬಹುದು. ಆದ್ರೆ, accountನಲ್ಲಿ ಇರೋ credit ಕಮ್ಮಿ, ಖಾಲಿ ಆಗ್ತಾ ಇದ್ದಂಗೆ ವಾಪಸ್ ಬರಲೇ ಬೇಕು! ಜೊತೆಗೆ ಸ್ವರ್ಗದಲ್ಲೂ ಭಯ, ಅಶಾಶ್ವತ feeling ಇದ್ದೇ ಇರುತ್ತೆ. ಇಂದ್ರನಿಗೂ ಕೊನೆ ಇದ್ದಿದ್ದೆ. ಉದಾಹರಣೆಗೆ, ಇಂದ್ರ ಯಾವಾಗಲೂ ಅವನ ಸ್ಥಾನ ಹೋಗುತ್ತೆ ಅನ್ನೋ ಭಯದಲ್ಲೇ ಇರ್ತಾನೆ, ಅದನ್ನ ಕಾಪಾಡಿಕೊಳ್ತಾನೇ ಇರ್ತಾನೆ.

ಈ ಭೂಲೋಕ ಧುಃಕಾಲಯವು ಮತ್ತು ಅಶಾಶ್ವತವೂ ಆದದ್ದು. ಎಲ್ಲಿಗೆ ಹೋದರೂ ಇಲ್ಲಿಗೆ ತಿರುಗಿ ಬರಲೇ ಬೇಕು. ಭಗವದ್ ಗೀತೆಯ ಎಂಟನೆಯ ಅಧ್ಯಾಯದ ಹದಿನಾರೆನೇ ಶ್ಲೋಕದಲ್ಲಿ ಭಗವಂತ ಸ್ವರ್ಗ (ಮತ್ತು ಬೇರೆಲ್ಲಾ) ಲೋಕಗಳ ಬಗ್ಗೆ ಸಂಕ್ಷಿಪ್ತ ಚಿತ್ರ ಕೊಡ್ತಾನೆ:
ಮಾಮುಪೇತ್ಯ ಪುನರ್ಜನ್ಮ
ಧುಃಖಾಲಯಂ ಅಶಾಶ್ವತಮ್
ನಾಪ್ನುವಂತಿ ಮಹಾತ್ಮಾನಃ
ಸಮ್ಸಿದ್ಧಿಂ ಪರಮಂ ಗತಾಃ

ಆಬ್ರಹ್ಮ ಭುವನ್ನಾಲ್ಲೋಕಾ
ಪುನರಾವರ್ತಿನೋರ್ಜುನ,
ಮಾಮ್ ಉಪೇತ್ಯತು ಕೌಂತೇಯ
ಪುನರ್ಜನ್ಮ ನ ವಿಧ್ಯತೆ.

ಅಂದ್ರೆ, ಬ್ರಹ್ಮಲೋಕದವರೆಗೂ ಯಾವುದೇ ಬೇರೊಂದು ಉನ್ನತ ಲೋಕಕ್ಕೆ ಹೋದರೂ ಮತ್ತೆ ಈ ಅಶಾಶ್ವತವಾದ, ಧುಃಖಾಲಯವಾದ ಭೂಮಿಗೆ ಬರಲೇಬೇಕು. ಆದ್ರಿಂದ, ಸ್ವರ್ಗವನ್ನ ಪಡೆದರೂ, ಅಥವ ಸ್ವರ್ಗಕ್ಕಿಂತ ಉನ್ನತ ಸ್ಥಾನವಾದ ಬ್ರಹ್ಮಲೋಕವನ್ನ ಪಡೆದರೂ ಅದೂ ಕೂಡ ಕ್ಷಣಿಕ ಸುಖವಷ್ಟೆ. ಆದ್ರಿಂದ ಇವುಗಳು ಮೋಕ್ಷವಲ್ಲ. ಆದರೆ ಭಗವಂತನಾದ ಶ್ರೀ ಕೃಷ್ಣನನ್ನ ಸಾಧಿಸಿದರೆ ಮತ್ತೆ ಜನ್ಮ ಇಲ್ಲ, ಅದು ಮೋಕ್ಷ.

ಹಾಗಿದ್ರೆ, ಏಕೆ ಜನ ಭಗವಂತನನ್ನ ಅವಲಂಬಿಸೋಲ್ಲ? ಮೋಕ್ಷವನ್ನ ಸಾಧಿಸೋಲ್ಲ? ಮೊದಲನೆಯ ಕಾರಣ "ಮಾಯೆ":
ದೈವಿಹ್ಯೇಶಾ ಗುಣಮಯೀ
ಮಮ ಮಾಯಾ ಧುರತ್ಯಯ
ಮಾಮೇವಯೇ ಪ್ರಪದ್ಯಂತೆ
ಮಾಯಾಮ್ ಏತಾಂ ತರಂತಿ ತೆ

ಈ ಮಾಯೆಯನ್ನು ದಾಟಬೇಕಾದ್ರೆ ಭಗವಂತನನ್ನ ಅವಲಂಬಿಸಬೇಕು, ಅವನನ್ನ ಅವಲಂಭಿಸಲು ಮಾಯೆಯನ್ನು ದಾಟಬೇಕು, ಅದಕ್ಕೆ ಬುದ್ಧಿ ಬೇಕು, ಅಲ್ಲೇ ಇರೋದು ಗಮ್ಮತ್ತು!! ಜನರಲ್ಲಿನ ಪೆದ್ದತನ, ಕೆಟ್ಟತನ, ಮೋಸ ಮಾಡೋ ಮನೋಭಾವ ಇರೋದ್ರಿಂದ ಈ ಮಾಯೇಯನ್ನ ದಾಟಲು ಆಗುವುದಿಲ್ಲಾ. ಪೆದ್ದು ಜನ ತಿಳುವಳಿಕೆ ಇಲ್ಲದೆ ಸಾವಿರಾರು ದೇವರುಗಳನ್ನು, ದೇವತೆಗಳನ್ನು ಬರೀ material benefitsಗೆ ಪೂಜೆ ಮಾಡ್ತಾರೆ, ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಯೋಚಿಸೋದೂ ಇಲ್ಲ. ಇಂತಾ ಜನರನ್ನ ಏಳನೆಯ ಅಧ್ಯಾಯದಲ್ಲಿ ತುಂಬಾ ಬಾರಿ ಭಗವಂತ "ಮೂಢ", "ಅಲ್ಪ ಮೇಧಸಾಂ", "ಧುಷ್ಕೃತಿನಃ" ಅಂತೆಲ್ಲಾ ಹೇಳ್ತಾನೆ.

ಜೊತೆಗೆ ಈ ಭಗವದ್ ಭಕ್ತಿ, ಬುದ್ದಿ ಬರಬೇಕಾದ್ರೆ ಸಾಧನೆ ಮುಖ್ಯ. ಇದಕ್ಕೆ ಜನ್ಮದ ಮೇಲೆ ಜನ್ಮ ತಾಳಿಬೇಕಾಗ ಬಹುದೇನೋ. ಭಗವಂತ ಎರಡು ಕಡೆ ಹೇಳ್ತಾನೆ:
a) ಮನುಷ್ಯಾಣಾಂ ಸಹಸ್ರೇಶು ಕಶ್ಚಿತ್ ಯತತಿ ಸಿದ್ಧಯೆ,
ಯತತಾಂ ಅಪಿ ಸಿದ್ಧಾನಾಂ ಕಶ್ಚಿನ್ ಮಾಮ್ ವೇತ್ತಿ ತತ್ವತಃ

b) ಬಹುನಾಂ ಜನ್ಮನಾಂ ಅಂತೆ ಜ್ಞಾನವಾನ್ ಮಾಮ್ ಪ್ರಪದ್ಯತೆ,
ವಾಸುದೇವ ಸರ್ವಂ ಇತಿ ಸಮಹಾತ್ಮಾ ಸುದುರ್ಲಬಃ

ಸಹಸ್ರಾರು ಜನರಲ್ಲಿ ಕೆಲವೇ ಕೆಲವರು ಯತ್ನಿಸುತ್ತಾರೆ, ಯತಿಸುವವರಲ್ಲೂ ಕೆಲವೇ ಕೆಲವರು ಭಗವಂತನನ್ನ, ಶ್ರೀ ಕೃಷ್ಣನನ್ನ ಸರ್ಯಾಗಿ ಅರ್ಥ ಮಾಡ್ಕೋತಾರೆ. ಈ ಮಟ್ಟಕ್ಕೆ ಬರಕ್ಕೂ ತುಂಬಾ ಕಷ್ಟ ಪಡಬೇಕಾಗುತ್ತೆ, ಅನೇಕ ಬಾರಿ ಜನ್ಮ ತೊಗೊಂಡ್ರೂ ಶ್ರೀ ಕೃಷ್ಣನನ್ನ, ವಾಸುದೇವನ್ನನ್ನ ಸರ್ವಸ್ವ ಅಂತ ತಿಳಿದು ಭಕ್ತಿಯಿಂದ ಭಜಿಸೋರು ತುಂಬಾ ಕಮ್ಮಿ, ಅತ್ಯಂತ ದುರ್ಲಬ. ಯಾರು ಸರ್ಯಾಗಿ ಆತ್ಮ, ಪರಮಾತ್ಮ, ಭಗವಂತ ತತ್ವಗಳನ್ನ ಸರ್ಯಾಗಿ ಅರ್ಥ ಮಾಡೋತಾರೋ ಅವರಿಗೆ ಮಾತ್ರ ಮೋಕ್ಷದ ಅವಕಾಶ.

Conclusion: ಸ್ವರ್ಗ ಬೇರೆ, ಮೋಕ್ಷ ಬೇರೆ. ಸ್ವರ್ಗ ಸುಲಭ, ಮೋಕ್ಷ ತುಂಬಾ ಕಠಿಣ. ಸ್ವರ್ಗಕ್ಕೆ ಮಾಯೆಯನ್ನ ದಾಟಬೇಕಿಲ್ಲ, ಮೋಕ್ಷ ದಾಟದೇ ಸಾಧ್ಯವಿಲ್ಲ. ಸ್ವರ್ಗವೂ ಮಾಯಾಲೋಕವೆ, ಧುಃಖಾಲಯವೇ, ಅಲ್ಲಿಂದ ಮತ್ತೆ ಭೂಲೋಕಕ್ಕೆ ಬರಲೇಬೇಕು, ಆದ್ರೆ ಮೋಕ್ಷ ಸಿಕ್ಕಮೇಲೆ ಮತ್ತೊಮ್ಮೆ ಜನ್ಮ ಇಲ್ಲ.

ಆದರೆ, ಮೋಕ್ಷ ಅಂದರೇನು? ಮೋಕ್ಷ ಸಿಕ್ಕಿದ ಮೇಲೆ ಹೋಗೋದು ಎಲ್ಲಿಗೆ? ಹೇಗಿರುತ್ತೇವೆ? ಮತ್ತೆ ನೋಡೋಣ ...... ಇನ್ನೊಂದು ದಿನ ನಮ್ಮಲ್ಲಿ "ಎಲ್ಲಾ ದೇವರೂ ಒಂದೇ, ಯಾರನ್ನ ಭಜಿಸಿದರೂ ಒಂದೇ" ಅನ್ನೋ [ತಪ್ಪು] ಕಲ್ಪನೆಯ ಬಗ್ಗೆ ಬರ್ಯೋಣ ಅಂತಿದ್ದೇನೆ.

No comments: