ಮೋಹಕ್ಕೆ ಮರುಳಾಗಿ,
ದಾಹಕ್ಕೆ ಬಲಿಯಾಗಿ,
ಚಿತ್ತಕ್ಕೆ ಜಡವಾಗಿ,
ಜೀವಕ್ಕೆ ಕೆಡೆಯಾಗಿ,
ಜ್ಞಾನಕ್ಕೆ ಹಸಿಯಾಗಿ,
ಬಂಧಕ್ಕೆ ಹುಸಿಯಾಗಿ,
ವಾಚಕ್ಕೆ ಕಸಿಯಾಗಿ,
ಎಲ್ಲಕ್ಕು ಕಡೆಯಾಗಿ
ಬಾಳುವ ಬಾಳೆಂತ ಬಾಳು ಹೇಳು ತಮ್ಮ!
Sunday, April 19, 2009
Saturday, April 18, 2009
ಬಾಡುವಂತ ಬೀಜ
ಬೀಜವಾದ ಜೀವ, ವೃಕ್ಷವಾದುದೆಂದು?
ದೇಹದಲ್ಲಿ ಚಿತ್ತ, ಬೆತ್ತಲಾಗಿದ್ದಂದು!
ಎಂದು ಆಯಿತಿಂತ, ಮಾಯೆ ಕಾಣೆ ದೇವ,
ಜೀವ ತನ್ನೇ ಮರೆತು, ಅಪ್ಪಿದಂತೆ ನೋವ,
ಸಾಯುವಂತ ದೇಹ, ಕಾಡುವಂತ ದಾಹ,
ತನ್ನೇ ಮೀರಿ ಬೆಳೆದ, ಕಾಡಿನಂತ ಮೋಹ,
ಮೋಹದಿಂದ ಜೀವ, ಬಂಧವಾಯಿತೀಗ,
ಅಳುತ ಮುಗ್ಧ ಜೀವ, ಪಿಡಿದು ಹಳೆಯ ರಾಗ,
ಇಷ್ಟಕ್ಕೆಲ್ಲ ಮುಕ್ತಿ, ಸಿಗಲು ಸಾಧ್ಯವೆಂದು?
ಇರುವ ಪುಟ್ಟ ಸಂದು, ನುಸಿಯಲಾಗುವಂದು,
ದೇಹ ಬಂಧ ಬಿಟ್ಟು, ಜೀವ ಹಾರಿದಂದು!!!
ಪಧ್ಯವ ಬರೆಯಲೆ?
ಕವನವ ಬರೆಯಲೇಂ?
ಮನದಾಳಕೆ ಇಳಿಯಲೇಂ?
ಚಿತ್ತವ ಕಲಕಲೇಂ?
ಅವಕಾಶವನ್ ಬಿತ್ತಲೇಂ?
ಬರೆಯುವದೇನನು, ಬಯಸುವುದೇನನು?
ಬಯಸದೆ ಬೆಸೆಯಲು ಯತ್ನಿಸಲೆ?
ವಿಷಯದ ಮರ್ಮವ ಪಸರಿಸಲೆ?
ಬರೆಯಲಿ ಏನನು ಅರಿಯೆನು ನಾನು,
ತಲ್ಲಣಗೊಳಿಸುವ ಯಾತನೆಯೋ?
ಮನಸಾಳದಿ ಕುದಿಯುವ ಯೋಚನೆಯೋ?
ಬುದ್ದಿಗೆ ಎಟುಕದ, ಚರ್ಚೆಗೆ ಸಲ್ಲದ,
ಕಣ್ಣಿಗೆ ಕಾಣದ ವಿಷಯವನೋ?
ವಿಷಯಕೆ ಸಿಲುಕದ ವಿಷಮವನೊ?
ಅರ್ಥವನರಿಯದೆ, ವ್ಯರ್ಥವಿದೆನ್ನದೆ
ರಚಿಸಲು ಕವನವ ಕೂತಿಹೆನು
ನೆನೆಯುತ ಇಡಿ-ಕವಿ ಜಾತಿಯನು.
..... ಮುಂದುರೆಯುವುದೋ ಇಲ್ಲವೋ ಅರಿಯೆ!!!!
ಮನದಾಳಕೆ ಇಳಿಯಲೇಂ?
ಚಿತ್ತವ ಕಲಕಲೇಂ?
ಅವಕಾಶವನ್ ಬಿತ್ತಲೇಂ?
ಬರೆಯುವದೇನನು, ಬಯಸುವುದೇನನು?
ಬಯಸದೆ ಬೆಸೆಯಲು ಯತ್ನಿಸಲೆ?
ವಿಷಯದ ಮರ್ಮವ ಪಸರಿಸಲೆ?
ಬರೆಯಲಿ ಏನನು ಅರಿಯೆನು ನಾನು,
ತಲ್ಲಣಗೊಳಿಸುವ ಯಾತನೆಯೋ?
ಮನಸಾಳದಿ ಕುದಿಯುವ ಯೋಚನೆಯೋ?
ಬುದ್ದಿಗೆ ಎಟುಕದ, ಚರ್ಚೆಗೆ ಸಲ್ಲದ,
ಕಣ್ಣಿಗೆ ಕಾಣದ ವಿಷಯವನೋ?
ವಿಷಯಕೆ ಸಿಲುಕದ ವಿಷಮವನೊ?
ಅರ್ಥವನರಿಯದೆ, ವ್ಯರ್ಥವಿದೆನ್ನದೆ
ರಚಿಸಲು ಕವನವ ಕೂತಿಹೆನು
ನೆನೆಯುತ ಇಡಿ-ಕವಿ ಜಾತಿಯನು.
..... ಮುಂದುರೆಯುವುದೋ ಇಲ್ಲವೋ ಅರಿಯೆ!!!!
Subscribe to:
Posts (Atom)
