ಬಂದಿರುವೆನೇಕೀ ಲೋಕಕ್ಕೆ?
ಯಾವ ಸಧನೆಗೆ?
ಯಾವ ಸುಕಕ್ಕೆ?
ಭಕ್ತನನಾಗುವ ಭಾಗ್ಯವು ಇಲ್ಲ,
ಭುಕ್ತನನಾಗುವ ಯೋಗ್ಯತೆ ಇಲ್ಲ,
ಯುಕ್ತವ ಚಿಂತಿಸೊ ಪ್ರಜ್ಞೆಯು ಇಲ್ಲ.
ಇದೆಂತಾ ಜೀವನ?
ಎನ್ನುವ ಮಂತನ,
ಮಾಡಿದೆ ಚೇತನ.
ನಯವೇ ಇಲ್ಲದೆ,
ದಿಕ್ಕೇ ತೋಚದೆ,
ಕುಗ್ಗಿದ ಎನ್ನೆದೆ,
ಧ್ಯೇಯವು ಸತ್ತಿದೆ,
ದೇಹವು ಬತ್ತಿದೆ,
ಭಯವೆಂಬುದು ಸುತ್ತಿದೆ.
ಎಲ್ಲಿಗೆ ಹೋಗಲಿ,
ಏನನ ಮಾಡಲಿ,
ಅರಿಯದೆ ಅಳುತಿದೆ ಎನ್ನೆದೆ.
ಎಲ್ಲಿಗೂ ಸಲ್ಲದೆ,
ಯಾರಿಗು ಒದಗದೆ,
ಸಲ್ಲದ ಯಾತನೆ ಮಾಡಿದೆ ಎನ್ನೆದೆ.
Subscribe to:
Post Comments (Atom)

No comments:
Post a Comment